*ಗರ್ಭಿಣಿ ಮಹಿಳೆಯರು ಗಮನಿಸಬೇಕಾದ ವಿಷಯಗಳು
1. ಗರ್ಭಿಣಿ ಎಂದು ದೃಢಪಟ್ಟ ನಂತರ ತಾಯಿ ಕಾರ್ಡನ್ನು ಪಡೆಯಬೇಕು.
2. ತಾಯಿ ಕಾರ್ಡ್ ಪಡೆಯಲು ಹೆಚ್ಚಿನ ಮಾಹಿತಿಗಾಗಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ / ಆಶಾ ಕಾರ್ಯಕರ್ತೆ ಅಥವಾ ಹತ್ತಿರದ ಆರೋಗ್ಯ ಕೇಂದ್ರಕ್ಕೆ ( ಸರ್ಕಾರಿ ಆಸ್ಪತ್ರೆ ) ಭೇಟಿ ನೀಡುವುದು.
3. ಗರ್ಭಿಣಿ ಮಹಿಳೆಯು ಎರಡು ಟಿ ಡಿ ಲಸಿಕೆ (ಇಂಜೆಕ್ಷನ್ )ಪಡೆಯುವುದು.
4. ಟಿ.ಡಿ 1 ಲಸಿಕೆ ಇದು ಗರ್ಭಧಾರಣೆ ದೃಢಪಡಿಸಿದಾಗ
ಟಿ.ಡಿ 2 ಲಸಿಕೆ ಮೊದಲನೇ ಟಿ. ಡಿ ಲಸಿಕೆ ಪಡೆದ ನಾಲ್ಕು ವಾರದ ಅಂತರದಲ್ಲಿ ಎರಡನೇ ಟಿ.ಡಿ ಲಸಿಕೆ ತೆಗೆದುಕೊಳ್ಳಬೇಕು.
ಬೂಸ್ಟರ್ ಡೋಸ್ ಟಿ.ಡಿ : ಪ್ರಸ್ತುತ ಗರ್ಭಧಾರಣೆ ಹಾಗೂ ಹಿಂದಿನ ಗರ್ಭಧಾರಣೆಯ ಮಧ್ಯ ಅಂತರ ಮೂರು ವರ್ಷಗಳ ಒಳಗೆ ಇದ್ದಲ್ಲಿ ಟಿ .ಡಿ ಬೂಸ್ಟರ್ ಲಸಿಕೆ ತೆಗೆದುಕೊಳ್ಳಬೇಕಾಗುತ್ತದೆ.
5. ಮೊದಲ ತ್ರೈಮಾಸಿಕದಲ್ಲಿ ಪೋಲಿಕ್ ಆಸಿಡ್ (FS Tablet ) ಹಾಗೂ ಮೊದಲನೇ ತ್ರೈಮಾಸಿಕ ನಂತರ ನಾಲ್ಕನೇ ತಿಂಗಳಿನಿಂದ ಹೆರಿಗೆಆಗುವವರೆಗೂ ಕಬ್ಬಿಣಾಂಶದ ಮಾತ್ರೆಯನ್ನು (IFA Tablet)ಹಾಗೂ ಕ್ಯಾಲ್ಸಿಯಂ ಮಾತ್ರೆ ತೆಗೆದುಕೊಳ್ಳಬೇಕು, (ಹೆರಿಗೆ ಆದ ನಂತರವೂ ಸೇವಿಸ ಬಹುದು)
*ನಿಮ್ಮ ಹಿಮೋಗ್ಲೋಬಿನ್( HB) ಅಂಶ ತಿಳಿದುಕೊಂಡಿದ್ದೀರಾ,ಏಕೆಂದರೆ
ಗರ್ಭಿಣಿಯರಲ್ಲಿ ರಕ್ತಹೀನತೆಯು ಹಲವು ತೊಡಕುಗಳಿಗೆ ಕಾರಣವಾಗುತ್ತದೆ.
1.ಹೆಚ್ಚು ಆಯಾಸ
2.ಗರ್ಭವಸ್ಥೆಯಲ್ಲಿ ಭ್ರೂಣದ ಕುಂಠಿತ ಬೆಳವಣಿಗೆ
3.ಅನಪೇಕ್ಷಿತ ಗರ್ಭಪಾತ
4.ಗರ್ಭಾವಸ್ಥೆಯಲ್ಲಿ ಅಥವಾ ಪ್ರಸವದ ಸಮಯದಲ್ಲಿ ಹೆಚ್ಚಿನ ಸಾವಿನ ಪರಿಸ್ಥಿತಿ ಬರಬಹುದು
5.ಪ್ರಸವದ ಸಮಯದಲ್ಲಿ ಅಧಿಕ ರಕ್ತಸ್ರಾವ
ಹೀಗೆ ತೊಂದರೆಗಳು ಕಂಡುಬರುತ್ತವೆ .
*ಗರ್ಭಿಣಿ ಸಮಯದಲ್ಲಿ ಗಂಡಾಂತರಗಳು
1. ಅಧಿಕ ರಕ್ತದ ಒತ್ತಡ (BP) (Hypertension)
2.ತೀವ್ರತರ ರಕ್ತ ಹೀನತೆ (severe anemia)
3.ಮಧುಮೇಹ (Diabetes)
4.ಹಿಂದಿನ ಹೆರಿಗೆ ಸಿಜೇರಿಯೇನ್ (LSCS)
5.ಮೂರ್ಛೆ ,ಅಸ್ತಮಾ ಇನ್ನೂ ಇತರ ರೋಗಗಳು ಇದ್ದರೆ
6.ಅವಳಿ ಜವಳಿ (Twins baby)
7.145 ಸೆಂ ಮೀ ಕಿಂತ ಕಡಿಮೆ ಎತ್ತರವಿದ್ದರೆ
8.ಭ್ರೂಣದಲ್ಲಿ ನ್ಯೂನತೆಗಳಿರುವುದು ,ಕುಂಠಿತ ಬೆಳವಣಿಗೆಗಳು
9.ಥೈರಾಯ್ಡ್ ಕಾಯಿಲೆಗಳು
10.ಹೆಚ್ಐ.ವಿ ,ಹೆಚ್. ಬಿ .ಎಸ್ .ಎ ಜಿ , ಇತ್ಯಾದಿ
11.ಪದೇ ಪದೇ ಗರ್ಭಪಾತ 12.ವೈದ್ಯರು ತಿಳಿಸಿದ ಗಂಡಾಂತರ ಗರ್ಭಿಣಿಯರು
*ಗರ್ಭಾವಸ್ಥೆಯ ಸಮಯದಲ್ಲಿ ಕನಿಷ್ಠ 9 ರಿಂದ 11 ಕೆಜಿ ತೂಕವನ್ನು ಹೆಚ್ಚಿಸಿಕೊಳ್ಳುವುದು ಆರೋಗ್ಯಕರ.
ಗರ್ಭವಸ್ಥೆಯ ಕೊನೆಯ 6 ತಿಂಗಳಲ್ಲಿ ಪ್ರತಿ ತಿಂಗಳಿಗೆ ಕನಿಷ್ಠ 1 ಕೆಜಿ ಯಷ್ಟು ತೂಕ ಹೆಚ್ಚಿಸಿಕೊಳ್ಳುವುದು ಆರೋಗ್ಯಕರ ಗರ್ಭಿಣಿ.
*ಹೇಗೆ ಆರೈಕೆ ಮಾಡಿಕೊಳ್ಳಬೇಕು
ದಿನದಲ್ಲಿ ಮಾಮೂಲಿಕಿಂತ ಹೆಚ್ಚು ಆಹಾರ ಸೇವಿಸಬೇಕು.
ಹಾಲು , ಹಸಿರು , ತರಕಾರಿ, ಸೊಪ್ಪು ಮತ್ತು ಹಣ್ಣುಗಳನ್ನು ಹೆಚ್ಚಾಗಿ ಉಪಯೋಗಿಸಬೇಕು.
ಆಹಾರದಲ್ಲಿ ಅಯೋಡಿನ್ ಯುಕ್ತ ಉಪ್ಪನ್ನು ಸೇವಿಸಬೇಕು ಅಥವಾ ಬಳಸಬೇಕು
ಗರ್ಭವಸ್ಥೆಯಲ್ಲಿ ಪ್ರತಿದಿನ ಹಗಲಿನಲ್ಲಿ ಕನಿಷ್ಠ ಎರಡು ಗಂಟೆ ಎಡಭಾಗದಲ್ಲಿ ತಿರುಗಿ ನಿದ್ರೆ ಮಾಡಬೇಕು.ಹಾಗೂ ರಾತ್ರಿ ನಿದ್ರೆ ಅವಶ್ಯಕತೆ
ತೊಡಕಿನ ಗರ್ಭವಿದ್ದರೆ ವಿಶ್ರಾಂತಿ ಹಾಗೂ ವೈದ್ಯರ ಚಿಕಿತ್ಸೆಯು ಮುಖ್ಯವಾಗಿರುತ್ತದೆ .
Contact Me. smnmanvi25@gmail.com